TestoAttitta Nodadiru Kannada…

M D Pallavi

Ultima modifica il: 26 ottobre 2017
Nessuna traduzione disponibileNessuna traduzione disponibile
We detected some issues
If you found mistakes, please help us by correcting them.

ಅತ್ತಿತ್ತ ನೋಡದಿರು, ಅತ್ತು ಹೊರಳಾಡದಿರು ನಿದ್ದೆ ಬರುವಳು ಹೊದ್ದು ಮಲಗು, ಮಗುವೆ; ಜೋ ಜೋಜೋ ಜೋ ಜೋ ಜೋಜೋ ಜೋ

ಸುತ್ತಿ ಹೊರಳಾಡದಿರು, ಮತ್ತೆ ಹಠ ಹೂಡದಿರು. ನಿದ್ದೆ ಬರುವಳು ಕದ್ದು ಮಲಗು ಮಗುವೆ ಜೋ ಜೋಜೋ ಜೋ ಜೋ ಜೋಜೋ ಜೋ. ಮಲಗು ಚೆಲ್ವಿನ ತೆರೆಯೆ, ಮಲಗು ಒಲ್ಮೆಯ ಸೆರೆಯೆ, ಮಲಗು ತೊಟ್ಟಿಲ ಸಿರಿಯೆ, ದೇವರಂತೆ; ಮಲಗು ಮುದ್ದಿನ ಗಿಣಿಯೆ, ಮಲಗು ಮುತ್ತಿನ ಮಣಿಯೆ, ಮಲಗು ಚಂದಿರನೂರ ಹೋಗುವೆಯಂತೆ . ತಾರೆಗಳ ಜರತಾರಿ ಅಂಗಿ ತೊಡಿಸುವರಂತೆ ಚಂದಿರನ ತಂಗಿಯರು ನಿನ್ನ ಕರೆದು; ಹೂವ ಮುಡಿಸುವರಂತೆ, ಹಾಲ ಕುಡಿಸುವರಂತೆ, ವೀಣೆ ನುಡಿಸುವರಂತೆ ಸುತ್ತ ನೆರೆದು. ಬಣ್ಣ ಬಣ್ಣದ ಕನಸು ಕರಗುವುದು ಬಲುಬೇಗ; ಹಗಲು ಬರುವನು ಬೆಳ್ಳಿ ಮುಗಿಲ ನಡುವೆ ಚಿನ್ನದಂಬಾರಿಯಲಿ ನಿನ್ನ ಕಳುಹುವರಾಗ ಪಟ್ಟದಾನೆಯ ಮೇಲೆ ಪುಟ್ಟ ಮಗುವೆ. ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು ನಿದ್ದೆ ಬರುವಳು ಹೊದ್ದು ಮಲಗು ಮಗುವೆ ಜೋ ಜೋಜೋ ಜೋ ಜೋ ಜೋಜೋ ಜೋ ಜೋ ಜೋಜೋ ಜೋ ಜೋ ಜೋಜೋ ಜೋ

Nessuna traduzione disponibileNessuna traduzione disponibile
  • 5

Ultime attività della community

Sincronizzato daTejaswini CM

Musixmatch per Spotify e
iTunes è disponibile ora
per il tuo computer

Scarica adesso